Education/kannada
From ITfC Annual Report 2014-15
ಕಳೆದ ದಶಕಗಳಿಂದಲೂ ತಂತ್ರಜ್ಞಾನ ದಲ್ಲಿ ಪ್ರಾಬಲ್ಯ ಹೊಂದಿರುವವರು ಮಾತ್ರವೇ ನಿಸ್ಸಂಕೋಚವಾಗಿ ವಾಣಿಜ್ಯ ಉದ್ದೇಶಕ್ಕೆಂದು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಬಹುದಾದ ಸಂದರ್ಭದಲ್ಲಿಯೂ ಐಟಿ ಫಾರ್ ಚೇಂಜ್ ಸಂಸ್ಥೆಯು ಶಿಕ್ಷಕರ ಶಿಕ್ಷಣದ ಬಗೆಗಿನ ಕಾರ್ಯಕ್ರಮಗಳನ್ನು ನಡೆಸಲು ಬದ್ದವಾಗಿರುವುದು ಒಂದು ದೃಢನಿರ್ಧಾರವೆಂದೇ ಹೇಳಬಹುದು. ಶೈಕ್ಷಣಿಕ ಹಂತಗಳನ್ನು ಕ್ರೋಡೀಕರಿಸುವಲ್ಲಿ ಮತ್ತು , ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಐಟಿ ಫಾರ್ ಚೇಂಜ್ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿಕ್ಷಣದಲ್ಲಿ ಮಾಹಿತಿ ಸಂವಹನದ ಬಗೆಗೆ ವಿಮರ್ಶನಾತ್ಮಕ ಅರ್ಥೈಸುವಿಕೆಯನ್ನು ಪ್ರತಿಪಾದಿಸುತ್ತಿದೆ.
- ಅನಿತಾ ರಾಮ್‌ಪಾಲ್ , ಪ್ರೊಪೆಸರ್ (Former Dean), ಶಿಕ್ಷಣ ಚಿಂತಕರು, ದೆಹಲಿ ವಿಶ್ವವಿದ್ಯಾಲಯ
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವ ಮತ್ತು ಕೆಲವು ಸುಧಾರಣೆಯನ್ನು ತರಲು ನಿಟ್ಟಿನ ನಮ್ಮ ಕಾರ್ಯಚಟುವಟಿಕೆಗಳು ದೀರ್ಘಾವದಿ ಸ್ವರೂಪದವಾಗಿದ್ದು, ಈ ಕೆಳಕಂಡ ಅಂಶಗಳ ಜೊತೆ ನಿರಂತರ ಪ್ರಗತಿಯಿಂದ ಕೂಡಿವೆ
ಕ್ಷೇತ್ರ ಯೋಜನೆಗಳು
ಸಾರ್ಮಜನಿಕ ಶಿಕ್ಷಣ ವ್ಯವಸ್ಥೆಯ ಕಾರ್ಯವನ್ನು ಬಲಗೊಳಿಸುವುದು ಧೀರ್ಘಾವದಿ ಉದ್ದೇಶವಾಗಿದೆ, ಅದಕ್ಕಾಗಿ ಪ್ರತಿ ವರ್ಷವೂ ಹೊಸ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಕಾರ್ಯಕ್ರಮವನ್ನು ನಿರಂತರವಾಗಿಸಲಾಗುತ್ತಿದೆ. ನಾವು ಶಾಲಾ ವ್ಯವಸ್ಥೆಯ ಜೊತೆ ಕೆಲಸ ಮಾಡುವಲ್ಲಿ ಎರಡು ವಿಭಿನ್ನ ವಿಧಾನಗಳನ್ನು ಹೊಂದಿದ್ದೇವೆ. ಮೊದಲನೇಯದು, ರಾಜ್ಯವ್ಯಾಪಿ ವ್ಯವಸ್ಥೆಯೊಡನೆ ವಿಸ್ತಾರವಾಗಿ ಕೆಲಸ ಮಾಡುವುದು, ವಿದ್ಯುನ್ಮಾನ ವಿಧಾನಗಳಿಂದ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಸಾಂಸ್ಥಿಕವಾಗಿ ಪ್ರಯತ್ನಿಸುವುದು. ಈ ಚಟುವಟಿಕೆಯನ್ನು ವಿಷಯ ಶಿಕ್ಷಕರ ವೇದಿಕೆ (STF) ಮತ್ತು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (KOER) ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಾವು ಶಿಕ್ಷಕರೊಡನೆ ಮತ್ತು ಶಿಕ್ಷಕ ಬೋಧಕರೊಡನೆ ಕಾರ್ಯನಿರ್ವಹಿಸುತ್ತಿದ್ದೇವೆ. ಎರಡನೇಯದು, ಶಾಲಾ ಹಂತದಲ್ಲಿ ಸಮಗ್ರವಾಗಿ ತೊಡಗಿಕೊಂಡು ಶಾಲಾಭಿವೃದ್ದಿ ಪ್ರಕ್ರಿಯೆಯ ಅಂಶಗಳೊಡನೆ ಕಾರ್ಯನಿರ್ವಹಿಸುವುದು, ಶಾಲಾ ಪ್ರಕ್ರಿಯೆಗಳಲ್ಲಿ ವಿದ್ಯುನ್ಮಾನ ವಿಧಾನಗಳನ್ನು ಅಳವಡಿಸುವುದು.
ಶಾಲಾಹಂತದ ಯೋಜನೆ
ಈ ಯೋಜನೆಯ ಅಂಗವಾಗಿ ಶಿಕ್ಷಕರ ಕಲಿಕಾ ಸಮುದಾಯ (TCOL) ಕಾರ್ಯಕ್ರಮವನ್ನು ರಚಿಸಲಾಯಿತು .ಈ ಕಾರ್ಯಕ್ರಮವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಹಭಾಗಿತ್ವದಲ್ಲಿ ಎರಡು ವಲಯಗಳ 17 ಸರ್ಕರಿ ಪ್ರೌಡಶಾಲೆಗಳಲ್ಲಿ ನಡೆಸಲಾಯಿತು. ಐ.ಸಿ.ಟಿ ಮಧ್ಯವರ್ತನೆಯನ್ನು ಶಾಲೆಯ ಶೈಕ್ಷಣಿಕ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಮಾದರಿಯಾಗಿ ಅಳವಡಿಸುವುದು ಮತ್ತು ಶಿಕ್ಷಕರು ತಮ್ಮ ಸಹವರ್ತಿ ಶಿಕ್ಷಕರೊಡನೆ ಸಂಪನ್ಮೂಲಗಳನ್ನು , ತರಗತಿ ಪ್ರಕ್ರಿಯೆಯ ಅಲೋಚನೆಗಳನ್ನು ಪರಸ್ಪರರಲ್ಲಿ ಸಹಯೋಜಿತವಾಗಿ ಹಂಚಿಕೊಳ್ಳಲು ಅನುವಾಗುವಂತಹ ವೇದಿಕೆಯನ್ನು ಅಭಿವೃದ್ದಿಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದು ತರಗತಿಗಳು, ಶಾಲೆ ಮತ್ತು ಶಿಕ್ಷಕರ ಅಭಿವೃದ್ದಿ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಆರಂಭಿಸಿಲಾದ ಪ್ರಾಯೋಗಿಕ ಕಾರ್ಯಕ್ರಮ.ಈ ಕಾರ್ಯಕ್ರಮದ ಮೂಲಕ ಐ.ಸಿ.ಟಿ ಯು ಯಾವ ರೀತಿಯಲ್ಲಿ ಸರ್ಕಾರಿ ಶಾಲೆಗಳ ಬೋಧನಾ ಪ್ರಗತಿಗೆ ಸಹಾಯಕವಾಗಬಲ್ಲದು ಎಂಬ ಬಗೆಗಿನ ಹಲವು ಅಂಶಗಳನ್ನು ತಿಳಿಯಲು ಸಹಾಯಕವಾಗಿದೆ.
ಈ ಕಾರ್ಯಕ್ರಮದಿಂದ ಶಿಕ್ಷಕರು ಸಹ ಕೆಲವು ವ್ಯತ್ಯಾಸಗಳನ್ನು ಗಮನಿಸಿದ್ದಾರೆ, ಅವರ ಬೋಧನಾ ಪ್ರಕ್ರಿಯೆಯಲ್ಲಿ ವರ್ಷದಲ್ಲಿ ಪಠ್ಯಕ್ರಮ ಪೂರ್ಣಗೊಳಿಸಬೇಕು ಎಂಬ ವಿಧಾನದಿಂದ ಕಲಿಕಾರ್ಥಿಗಳ ಸಂದರ್ಭ, ಹಂತ ಮತ್ತು ಅಗತ್ಯತೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಪೂರಕವಾಗಿ ಬಹುಹಂತದ ಬೊಧನಾ ವಿನ್ಯಾಸವನ್ನು ರಚಿಸಿ ಬೋಧಿಸುವ ಮತ್ತು ಮಕ್ಕಳ ಕಲಿಕೆ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸುವ ವಿಧಾನಕ್ಕೆ ಬದಲಾಗಿದ್ದಾರೆ. ಬಹುಹಂತದ ಬೋಧನಾ ವಿಧಾನವನ್ನು ಬಳಸುವಲ್ಲಿ ಶಿಕ್ಷಕರಿಗೆ ವಿದ್ಯುನ್ಮಾನ ಸಂಪನ್ಮೂಲಗಳು ಮತ್ತು ಐ.ಸಿ.ಟಿ ಬಳಕೆ ಬಹಳ ಉಪಯುಕ್ತವಾಗಿದೆ. ಇದರ ಜೊತೆಗೆ ಶಿಕ್ಷಕರು ಶಾಲೆ-ಶಾಲೆಗಳ ನಡುವೆ ತಮ್ಮ ಕಲಿಕೆಯನ್ನು , ಸಂಪನ್ಮೂಲಗಳನ್ನು ವಲಯಹಂತದ ಕಾರ್ಯಗಾರಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ . ಈ ಕಾರ್ಯಗಾರಗಳಿಗೆ ಪೂರಕವಾಗಿ ಶಿಕ್ಷಕರ ಚರ್ಚೆಗಳಿಗೆ ಸಾಧ್ಯವಾಗುವಂತಹ ವಲಯಹಂತದ ಇಮೇಲ್ ಗುಂಪುಗಳು ಮತ್ತು ಮೊಬೈಲ್ ಆಧಾರಿತ ಗುಂಪುಗಳನ್ನು ರಚಿಸಲಾಗಿದೆ.
ಬೋಧನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಕಲಿಕಾ ಅವಕಾಶಗಳನ್ನು ಹೆಚ್ಚಿಸಬಹುದಾಗಿದೆ. ಜಿಯೋಜೀಬ್ರಾ ಮತ್ತು ಪೆಟ್ ಎಂಬ ಟೂಲ್‌ಗಳ ಮೂಲಕ ಬೋದನೆಯನ್ನು ಪರಿಣಾಮಕಾರಿಯಾಗಿಸಬಹುದು ಮತ್ತು ಮಕ್ಕಳ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸಬಹುದಾಗಿದೆ. ಶಿಕ್ಷಕರ ಕಲಿಕಾ ಸಮುದಾಯ ಕಾರ್ಯಕ್ರಮದ ಕಾರ್ಯಗಾರಳು ಶಿಕ್ಷಕರು ತಮ್ಮ ಆಲೋಚನೆಗಳು, ಅನುಭವಗಳು ಮತ್ತು ಸಂಪನ್ಮೂಲಗಳನ್ನು ಇತರೆ ಶಿಕ್ಷಕರೊಡನೆ ಹಂಚಿಕೊಳ್ಳಲು ಸಹಾಯಕವಾಗಿವೆ.
-Jayanthi N, Mathematics Teacher, Domlur High School
"ಈ ಮಕ್ಕಳು ಶಾಲೆಬಿಟ್ಟ ನಂತರ ಅವರ ಜೀವನಕ್ಕೆ ಅರ್ಥಪೂರ್ಣವಾಗಿ ಬದುಕುವುದನ್ನು ಕಲಿಸೋಣ " ಎಂಬುದು ದೊಮ್ಮಲೂರು ಪ್ರೌಢಶಾಲೆಯ ಶಾಲೆಯ ಮುಖ್ಯಶಿಕ್ಷಕರ ಭಾವನಾತ್ಮಕ ಅನಿಸಿಕೆ. ಈ ಶಾಲೆಯಲ್ಲಿ ನಮ್ಮ ಶೈಕ್ಷಣಿಕ ಕಾರ್ಯಕ್ರಮವು ಗಣಿತ ಮತ್ತು ಕನ್ನಡ ವಿಷಯದಲ್ಲಿ ನಡೆಯುತ್ತಿದ್ದು, ಶಾಲೆಯ ಪ್ರಸ್ತುತ ಪಠ್ಯಕ್ರಮಕ್ಕೆ ಅವಲಂಬಿತವಾಗದೇ ಮಕ್ಕಳ ಕಲಿಕಾ ಹಂತಕ್ಕೆ ಪೂರಕವಾಗಿ ವಿವಿಧ ವಿಧಾನಗಳು ಮತ್ತು ಸಾಮಗ್ರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಈ ಕಾರ್ಯಕ್ರಮದ ಮೂಲಕ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಅನುಸ್ಥಾಪಿಸಲಾಗಿದ್ದು ಶಿಕ್ಷಕರನ್ನು ತರಬೇತುಗೊಳಿಸಲಾಗುತ್ತಿದೆ . ಪರಿಣಾಮಕಾರಿ ಕಲಿಕೆಗಾಗಿ ಹೊಸ ಹೊಸ ಬೋಧನಾ ವಿಧಾನಗಳು, ಸಂಪನ್ಮೂಲಗಳು ಮತ್ತು ವಿದ್ಯುನ್ಮಾನ ಕತೆಗಳನ್ನು ಪರಿಚಯಿಸಲಾಗುತ್ತಿದೆ . " ಬಾಯನ್ನೇ ತೆರೆಯದೇ ಮೌನವಾಗಿರುತ್ತಿದ್ದ ಮಕ್ಕಳು ಈಗ ತರಗತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ; ಇವರು ಇಷ್ಟೆಲ್ಲಾ ಮಾಡಬಲ್ಲರು ಎಂಬುದು ನಮಗೆ ತಿಳಿದಿರಲಿಲ್ಲ ಈಗ " ಎಂದು ಗಣಿತ ಶಿಕ್ಷಕರು ಆಶ್ಚರ್ಯಪಡುತ್ತಾರೆ. "ಮಕ್ಕಳ ಓದುವ ಹಂತ ಶೇ25 ರಷ್ಟು ಹೆಚ್ಚಾಗಿದೆ " ಎಂಬುದು ಕ್ನನಡ ಶಿಕ್ಷಕರ ಅಭಿಪ್ರಾಯ. ಸ್ಥಳೀಯ ಸಮುದಾಯ ಸಂಸ್ಥೆಗಳಿಗೆ ಬೇಟಿ ನೀಡುವ ಮೂಲಕ ಮಕ್ಕಳಿಗೆ ನೈಜ ತರಗತಿಯ ಅನುಭವ ಮೂಡಿಸಲಾಗಿದೆ. ಶೈಕ್ಷಣಿಕ ವರ್ಷ ಮುಗಿದು ಹೋದಾಗ ಮುಂದಿನ ವರ್ಷವೂ ನೀವು ಬರ್ತೀರಾ ಎಂದು ಕನಸು ತುಂಬಿದ ಕಣ್ಗಳನ್ನು ದೊಡ್ಡದಾಗಿ ತೆರೆದು ಕೇಳುತ್ತಾರೆ 8ನೇ ತರಗತಿಯ ಜಯಶ್ರೀ.. |
ಮೂರು ವರ್ಷದ ಈ ಪ್ರಾಯೋಗಿಕ ಕಾರ್ಯಕ್ರಮದ ಮೊದಲನೇ ವರ್ಷದ ಕೊನೆಯಲ್ಲಿ ವಿಶ್ಲೇಚಿಸಿದಾಗ , ಕೆಳವರ್ಗದ ಮಕ್ಕಳು ನಗರದಲ್ಲಿ ಎದುರಿಸುವ ತಾರತಮ್ಯಗಳ ಹಂತಗಳು, ನಿಗದಿತ ಬೋದನಾ ವಿದಾನಗಳು ಮತ್ತು ಪಠ್ಯಕ್ರಮದ ಅಗತ್ಯತೆ, ಸಮಾನ್ಯ ಜ್ಞಾನ ವ್ಯವಸ್ಥೆ, ಶಾಲೆ ಒಂದು ಸಂಸ್ಥೆಯಾಗು ಸಮುದಾಯ ಮತ್ತು ಮಕ್ಕಳ ಸಮಸ್ಯೆಗಳಿಗೆ ಪ್ರತಿಕ್ರಯಿಸುವಲ್ಲಿ ಸಬಲೀಕರಣ ಹೊಂದದಿರುವುದರ ಬಗ್ಗೆ ಮಕ್ಕಳಲ್ಲಿ ಕೆಲವು ಪ್ರಶ್ನೆಗಳು ಹೊರಹೊಮ್ಮಿವೆ.ಸಾಮಜಿಕ ಸಮಾನತೆಗೆ ಪೂರಕವಾಗಿ ಶಾಲೆಗಳಲ್ಲಿ ಪ್ರಕ್ರಿಯೆ ನಡೆಯಬೇಕಾದಲ್ಲಿ ನಮ್ಮ ಪಠ್ಯಕ್ರಮ ಮತ್ತು ಶೈಕ್ಷಣಿಕ ನೀತಿಗಳಲ್ಲಿ ಗಮನಾರ್ಹ ಬದಲಾವಣೆಯಾಗಬೇಕಿದೆ. ನಮ್ಮ ಮುಂದಿನ ಎರಡು ವರ್ಷದ ಶಿಕ್ಷಕರ ಕಲಿಕಾ ಸಮುದಾಯ ಕಾರ್ಯಕ್ರಮದಲ್ಲಿ ಶಾಲೆಗಳನ್ನು ಸಂಸ್ಥೆಗಳಾಗಿ ಬಲಪಡಿಸುವ, ಶಿಕ್ಷಕರು ಸಹಯೋಜಿತವಾಗಿ ಕಾರ್ಯನಿರ್ವಹಿಸುವ, ಶಾಲಾ ವ್ಯವಸ್ಥೆಯನ್ನು ಸುರಕ್ಷಿತ, ಪೂರಕ ಮತ್ತು ಜವಾಬ್ದಾರಿಯುತವಾಗಿಸುವ ಅಭಿವೃದ್ದಿ ಪ್ರಕ್ರಿಯೆಗಲ ಕಡೆ ಗಮನವಹಿಸಲಾಗುವುದು.
ರಾಜ್ಯ ಮಟ್ಟದ ಕ್ಷೇತ್ರ ಯೋಜನೆ
ಸೇವಾ ನಿರತ ಶಿಕ್ಷಕರ ತರಬೇತಿ
ವಿಷಯ ಶಿಕ್ಷಕರ ವೇದಿಕೆ (STF) ಮತ್ತು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕಾರ್ಯಕ್ರಮದ ಮೂಲಕ ಕರ್ನಾಟಕ ಶಿಕ್ಷಣ ಇಲಾಖೆ ಯ ಡಿ.ಎಸ್.ಇ.ಆರ್.ಟಿ ಮತ್ತು ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ ಸಹಭಾಗಿತ್ವದೊಂದಿಗಿನ ನಮ್ಮ ಕಾರ್ಯಕ್ರಮಕ್ಕೆ 5 ವರ್ಷಗಳು ತುಂಬಿವೆ. ಶಿಕ್ಷಕರಲ್ಲಿ ವೃತ್ತಿಪರ ಬೆಳವಣಿಗೆಗೆ ಪೂರಕಾವದ ಸ್ವ-ನಿರ್ದೇಶಿತ, ನಿರಂತರ, ಸಹವರ್ತಿ ಕಲಿಕೆಯನ್ನು ಮೂಡಿಸುವುದು ಎಸ್.ಟಿ.ಎಫ್ ಕಾರ್ಯಕ್ರಮದ ಗುರಿಯಾಗಿದೆ. ಎಸ್.ಟಿ.ಎಫ್ ಕಾರ್ಯಕ್ರಮದ ಶಿಕ್ಷಕರು ಸಹಯೋಜಿತವಾಗಿ ಸಂಪನ್ಮೂಲ ರಚನೆಯಲ್ಲಿ ತೊಡಗಿದ್ದು ಕರ್ನಾಟಕ ಮುಕ್ತ ಶೈಕ್ಷಣೀಕ ಸಂಪನ್ಮೂಲ ಪುಟ ರಚನೆಯಾಗಿದೆ. ಕೆಳಹಂತದ ಶಿಕ್ಷಕರರ ವೃತ್ತಿಪರ ಬೆಳವಣಿಗೆಯ ಮೂಲಕ , ಆ ಶಿಕ್ಷಕರನ್ನು ಸಹ ಸಾರ್ವಜನಿಕ ಶಿಕ್ಷನ ವ್ಯವಸ್ಥೆಯ ಪ್ರಕ್ರಿಯೆಗಳ ಭಾಗವಾಗಿಸುವುದರ ಕಡೆಗೆ ಗಮನ ನೀಡಾಗುತ್ತಿದೆ.
ಕಳೆದ ವರ್ಷ ತುಂಬಾ ಆಳವಾಗಿ ಗಣಿತ ಶಿಕ್ಷಕರೊಡನೆ ಕೆಲಸ ಮಾಡಲಾಯಿತು. ರಾಜ್ಯಾದ್ಯಾಂತ ಗಣಿತ ಶಿಕ್ಷಕರಿಗೆ ಪಠ್ಯಕ್ರಮ ಪುರಕ ಸಂಪನ್ಮೂಲ ರಚನೆ ಮತ್ತು ಸಹವರ್ತಿ ಕಲಿಕೆಯಲ್ಲಿ ಐ.ಸಿ.ಟಿ. ಮಧ್ಯವರ್ತನೆಯ ಬಗ್ಗೆ ಅರ್ಥೈಸಲಾಯಿತು. ಹಾಗೆಯೇ ಈ ವರ್ಷ ಕನ್ನಡ ಭಾಷಾ ಶಿಕ್ಷಕರ ವೇದಿಕೆ ಕಾರ್ಯಕ್ರಮವನ್ನು 10 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು. ಜೊತೆಗೆ ಮುಖ್ಯಶಿಕ್ಷಕರ ವೇದಿಕೆ ಯನ್ನು ಇನ್ನು 6 ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಕೊಯರ್ ಕಾರ್ಯಕ್ರಮದಲ್ಲಿ ಗಣಿತ, ವಿಜ್ಞಾನ ಮತ್ತು and ಸಮಾಜ ವಿಜ್ಞಾನ ವಿಷಯಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕರಿಗೆ ಶಿಕ್ಷಕರ ಮೂಲಕ ಪಠ್ಯ, ಆಡಿಯೋ, ವೀಡಿಯೋ, ಸಿಮುಲೇಷನ್, ಆನಿಮೇಷನ್ , ಬಹುಮಾಧ್ಯಮ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಕೆ-ರಚನೆ-ವಿಮರ್ಶೆ-ಪುನರ್ರಚನೆ -ಪ್ರಕಟಣೆ ಅಭಿವೃದ್ದಿಪಡಿಸಲಾಗಿದೆ .
ಎಸ್.ಟಿ.ಎಫ್ ಕಾರ್ಯಕ್ರಮವು ಒಂದು ವ್ಯವಸ್ಥೆಯೊಳಗೆ ಅತೀ ದೊಡ್ಡ ವೃತ್ತಿಪರ ಕಲಿಕಾ ಸಮುದಾಯವನ್ನು ಹೊಂದಿರುವ ವೇದಿಕೆಯಾಗಿದೆ. ಈ ವೇದಿಕೆಯಲ್ಲಿ ಶಿಕ್ಷಕರೇ ಸಂಪನ್ಮೂಲ ಹಂಚಿಕೆಯಲ್ಲಿ ಉತ್ತರದಾಯತ್ವ ಹೊಂದಿದ್ದಾರೆ. ತರಗತಿ ಕೋಣೆ ಪ್ರಕ್ರಿಯೆಗೆ ಪೂರಕವಾದ ಸಂಪನ್ಮುಲಗಳು ಸಾಮಗ್ರಿಗಳಂತಹ ಶಿಕ್ಷಕರ ಅವಶ್ಯಕತೆಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ಹಂಚಿಕೊಳ್ಳು ಮೂಲಕ ಶಿಕ್ಷಕರೇ ಶಿಕ್ಷಕರಿಗೆ ಪ್ರತಿಕ್ರಯಿಸುತ್ತಾರೆ. ರಾಜ್ಯ ಮಟ್ಟದ ಗುಂಪು ಅಲ್ಲಲ್ಲಿ ಜಿಲ್ಲಾ ಮಟ್ಟದಲ್ಲಿ ಸಣ್ಣ ಗುಂಪುಗಳಾಗಿ, ಮೊಬೈಲ್ ಆಧಾರಿತ ಗುಂಪುಗಳಾಗಿಯೂ ವಿಂಗಡಣೆಯಾಗಿದೆ. ಕರ್ನಾಟಕದಲ್ಲಿನ ಸುಮಾರು 6800 ಶಾಲೆಗಳಲ್ಲಿನ ಎಲ್ಲಾ ವಿಷಯಗಳು, 7 ಬೋಧನಾ ಮಾಧ್ಯಮಗಳು ಮತ್ತು 12 ವಿಷಯಗಳನ್ನು ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮದಡಿಯಲ್ಲಿ ತರುವ ಉದ್ದೇಶ ಹೊಂದಲಾಗಿದೆ. 2015-16 ನೇ ಸಾಲಿನಲ್ಲಿ Kannada ವೇದಿಕೆ ಇನ್ನುಳಿದ 20 ಜಿಲ್ಲೆಗಳ ಶಿಕ್ಷಕರಿಗೆ , ಹಿಂದಿ ವೇದಿಕೆ 10 ಜಿಲ್ಲೆಗಳಿಗೆ ಮತ್ತು ವಿಜ್ಞಾನ ವೇದಿಕೆ ಎಲ್ಲಾ ಜಿಲ್ಲೆ ಗಳ ಶಿಕ್ಷಕರಿಗೆ ವಿಷಯ ಶಿಕ್ಷಕರ ಔಏದಿಕೆ ಕಾರ್ಯಕ್ರ ಮ ಯೋಜಿಸಲಾಗಿದೆ. ಗಣಿತ ಕೊಯರ್ ಕಾರ್ಯಕ್ರಮದ ಮೂಲಕ ಗಣಿತ ವಿಷಯದ ಸಂಪನ್ಮೂಲಗಳನ್ನು ಮತ್ತು ಜಿಯೋಜೀಬ್ರಾ ಗೆ ಆನ್‌ಲೈನ್ ಕೋರ್ಸ್ ನಡೆಸಲಾಗುವುದು.ವಿಜ್ಞಾನ ಕೊಯರ್ ಕಾರ್ಯಕ್ರಮದ ಮೂಲಕ ಶಿಕ್ಷಕರು ತಮ್ಮ ವಿಜ್ಞಾನ ಪ್ರಯೋಗಾಲಯವನ್ನು ಸಕ್ರಿಯಗೊಳಿಸಲು ಸಾಧ್ಯವಾಗುವಂತಹ ಪ್ರಯೋಗಗಳ ವೀಡಿಯೋಗಳನ್ನು ಅಭಿವೃದ್ದಿಪಡಿಸಿ ಹಂಚಿಕೊಳ್ಳುವುದು. |
ಶಿಕ್ಷಕರ ಶಿಕ್ಷಣ ಮತ್ತು ಶಿಕ್ಷಣ ಇಲಾಖೆಯಲ್ಲಿ ತುಂಬಾ ಅವಶ್ಯಕ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಐಟಿ ಫಾರ್ ಚೇಂಜ್ ಸಂಸ್ಥೆಯು , ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವಕ್ಕೆ ಉತ್ತಮ ಉದಾಹರಣೆಯಾಗಿದೆ.
-ಪ್ರೋ.ವಸಂತ್ ಭಟ್, ಪ್ರಾದೇಶಿಕ ಶಿಕ್ಷಣ ಸಂಸ್ಥೆ , ಮೈಸೂರು. ಕಳೆದ ವರ್ಷದ ವಾರ್ಷಿಕ ವರದಿಯಲ್ಲಿ , ಆರ್.ಎಂ.ಎಸ್.ಎ. ಜಾಯಿಂಟ್ ರಿವ್ಯೂ ಮಿಷನ್ ರವರು ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮವನ್ನು ಇತರೆ ರಾಜ್ಯಗಳಿಗೂ ಶಿಫಾರಸ್ಸು ಮಾಡಿರುವುದರ ಬಗ್ಗೆ ನಮೂದಿಸಿದ್ದೇವು, ಅದರಂತೆ ಹಲವು ರಾಜ್ಯಗಳು ಶಿಕ್ಷಕರ ಅಭಿವೃದ್ದಿಗಾಗಿ ಇದೇ ರೀತಿಯ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿವೆ . ಅದರಂತೆ ನಾವು ತೆಲಂಗಾಣ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕಾರ್ಯಕ್ರಮವನ್ನು ತೆಲಂಗಾಣ ರಾಜ್ಯದ ಲ್ಲಿ ಪ್ರಾರಂಭಿಸಿದ್ದೇವೆ ಮತ್ತು ಅಸ್ಸಾಂ ರಾಜ್ಯದಲ್ಲಿಯೂ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ. |
STF statistics | |
---|---|
Members | 15,000 |
Schools | 6,000 |
FOSS educational applications | 15+ |
emails exchanged | 75,000+ |
Teachers purchasing laptops | 1000+ |
KOER statistics | |
---|---|
Total web page views | 1.7 million+ |
Web Pages Created | 7,000+ |
Resource files uploaded | 4,000+ |
Pages Edited | 32,000+ |
Users/ Editors | 538 (teachers) |
ಶಿಕ್ಷಕರನ್ನು ಒಂದೆಡೆಗೆ ಸೇರಿಸುವ ಕಾರ್ಯಕ್ರಮದ ಉದ್ದೇಶದಲ್ಲಿ ವೃತ್ತಿಪರ ಸಂವಹನ ನಡೆಸುವ ಮೂಲಕ ಒಳ್ಳೆಯ ಫಲಿತಾಂಶ ಪಡೆಯುವ ಶಿಕ್ಷಕರ ಗುಂಪನ್ನು ನೋಡಬಹುದು. ಈ ಶಿಕ್ಷಕರು ಪಠ್ಯಕ್ರಮ ಮತ್ತು ಶಾಲಾ ಪ್ರಕ್ರಿಯೆಗಳಲ್ಲಿ ಸಮರ್ಪಕವಾದ ನಿರ್ಣಯ ಕೈಗೊಳ್ಳಲು ಸಮರ್ಥರಾಗುತ್ತಾರೆ. ಪ್ರೊ.ರಾಜಾರಾಂ ಶರ್ಮಾ,CIET, NCERT( ಮುಕ್ತ ಶೈಕ್ಷಣಿಕ ಸಂಪನ್ಮೂಲ ಗಳ ಬಗೆಗಿನ ವಾವ್ಸಾನ್ ಮುಕ್ತ ವಿಶ್ವವಿದ್ಯಾಲಯದ ಪುಸ್ತಕದ ಭಾಗವಾದ ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮದ ಬಗೆಗಿನ ಪ್ರಕರಣ ಅಧ್ಯಯನದಲ್ಲಿ ಹೇಳಿರುವುದು)
ಶಿಕ್ಷಕ ಬೋಧಕರ ಕಾರ್ಯಕ್ರಮಗಳು
ಶಿಕ್ಷಕ ಬೋದಕರು ಕೇವಲಮಾರ್ಗದರ್ಶನ ಮತ್ತು ನಿಯಂತ್ರಣ ವಿಧಾನದಿಂದ ತಮ್ಮ ಶಾಲಾ ಭೇಟಿಯ ಸಂದರ್ಭದಲ್ಲಿ ಶಿಕ್ಷಕರಿಗೆ ಬೆಂಬಲ ನೀಡುವಂತಾಗಲು ಕೆಲವು ಸಾಂಸ್ಥಿಕ ಸಂರಚನೆಯನ್ನು ಅಭಿವೃದ್ದಿಪಡಿಸಬೇಕಿದೆ. ಈ ರೀತಿಯ ಬದಲಾವಣೆ ಬಹಳ ಅಗತ್ಯವಾಗಿದ್ದು, ಪ್ರತೀಯೊಬ್ಬರಲ್ಲೂ ಮತ್ತು ಪ್ರತಿ ಸಂಸ್ಥೆಯಲ್ಲೂ ಆಗಬೇಕಿದೆ. ನಾವು ಗಮನಿಸಿದಂತೆ ಶಿಕ್ಷಕ ಬೋಧಕರು ತಂತ್ರಜ್ಞಾನ ಅಳವಡಿಕೆಯಲ್ಲಿ ಬಹಳ ಹಿಂದುಳಿದಿದ್ದಾರೆ, ಅವರಿಗೆ ಈ ಕಲಿಕೆಯನ್ನು ಸಹವರ್ತಿ ಚಟುವಟಿಕೆಯ ಮೂಲಕ ನೀಡುವುದು ಕ್ಲಿಷ್ಟಕರವಾಗಿದೆ. ಡಿ.ಎಸ್.ಇ.ಆರ್.ಟಿ ರವರ ಮತ್ತು Commonwealth Educational Media Centre for Asia ಸಹಭಾಗಿತ್ವದಲ್ಲಿ, ಐಟಿ ಫಾರ್ ಚೇಂಜ್ ಸಂಸ್ಥೆಯು ಡಯಟ್ ಉಪನ್ಯಾಸಕರಿಗೆ ವಿವಿಧ ವಿದ್ಯುನ್ಮಾನಗಳ ಬಳಕೆ ಬಗೆಗಿನ ಸಾಮರ್ಥ್ಯ ಆಭಿವೃದ್ದಿ ತರಬೇತಿಯನ್ನು ನೀಡಲಾಯಿತು.ಈ ಕಾರ್ಯಕ್ರಮವು ಡಿ.ಎಡ್ ಪಠ್ಯಕ್ರಮದ ಪರಷ್ಕೃತ ಪಠ್ಯಕ್ರಮ ಕಾರ್ಯಗಾರದಲ್ಲಿಯೋ ಸಂಯೋಜನೆಗೊಂಡಿತ್ತು. ಡಯಟ್ ಉಪನ್ಯಾಸಕರು ಬೋದನೆ ಮತ್ತು ಕಲಿಕೆಯಲ್ಲಿ ಐ.ಸಿ.ಟಿ ಮಧ್ಯವರ್ತನೆ ಎಂಬ ವಿಷಯ ಬೋ ಧಿಸುವುದನ್ನು ಕಲಿತರು. ಈ ವಿಷಯವನ್ನು ಐಟಿ ಫಾರ್ ಚೇಂಜ್ ವತಿಯಿಂದಲೇ ರಚಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಡಯಟ್ ಉಪನ್ಯಾಸಕರನ್ನು ರಾಜ್ಯ ಶಿಕ್ಷಕ ಬೋಧಕರ ಕಲಿಕಾ ಸಮುದಾಯ ಕ್ಕೆ ಸೇರ್ಪಡೆ ಮಾಡಲಾಯಿತು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಡಯಟ್ ಉಪನ್ಯಾಸಕರು ತಮ್ಮ ಜಿಲ್ಲಾ ಹಂತದಲ್ಲಿ ಇದೇ ರೀತಿಯ ಕಾರ್ಯಗಾರಗಳನ್ನು ತಮ್ಮ ಜಿಲ್ಲಾ ಹಂತದ ಡಿ.ಎಡ್ ಕಾಲೇಜು ಉಪನ್ಯಾಸಕರಿಗೆ ಹಮ್ಮಿಕೊಂಡಿದ್ದಾರೆ. ಶಿಕ್ಷಕರ ಬೋದಕರು ಬೋಧನೆ-ಕಲಿಕೆಯಲ್ಲಿ ಐ.ಸಿ.ಟಿ ಮಧ್ಯವರ್ತನೆಯ ಬಗೆಗೆ ತರಬೇತಿ ನಡೆಸಿರುವುದ ಇದೇ ಮೊದಲು.
2015-16 ನೇ ಸಾಲಿನಲ್ಲಿ ,ಶಿಕ್ಷಕ ಬೋದಕರ ಕಲಿಕಾ ಸಮುದಾಯಕಾರ್ಯಕ್ರಮವನ್ನು CEMCA ಮತ್ತು ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ರವರ ಸಹಭಾಗಿತ್ವದಲ್ಲಿ ದಕ್ಷಿಣ ಭಾರತದ ಇತರೆ ಎರಡು ರಾಜ್ಯಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ.
CEMCA ಸಹಯೋಗದೊಂದಿಗೆ ಕರ್ನಾಟಕದಲ್ಲಿ ಐ.ಟಿ.ಫಾರ್ ಚೇಂಜ್ ಶಿಕ್ಷಕರ ತರಬೇತಿಗಳನ್ನು ಬಲಪಡಿಸುತ್ತಿದೆ. ಜೊತಗೆ 2012-15 ರಲ್ಲಿ ನಾನು CEMCA ನಿರ್ದೇಶಕನಾಗಿದ್ದಾಗ, ಐ.ಸಿ.ಟಿ ಆಧಾರಿತ ಶಿಕ್ಷಕರ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೆಹಲಿ, ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಶಿಕ್ಷಕರ ತರಬೇತಿಗಳಿಗೂ ಬೆಂಬಲ ನೀಡುತ್ತಿದ್ದಾರೆ. ಇದರ ಫಲಿತಾಂಶವಾಗಿ ಸುಮಾರು 350 ಶಿಕ್ಷಕ ಬೋಧಕರು ಮುಕ್ತ ಶೈಕ್ಷಣಿಕ ಪರಿಕರಗಳನ್ನು ಬಳಸಲು ಸಾಧ್ಯವಾಗಿದೆ. ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲವನ್ನು ಅಭಿವೃದ್ದಿಪಡಿಸಲು ಕರ್ನಾಟಕದಲ್ಲಿ ಶಿಕ್ಷಕರು ಮತ್ತು ಬೋಧಕ ಶಿಕ್ಷಕರ ನಡುವೆ ಸುಸ್ಥಿರ ಸಂಪರ್ಕಜಾಲ ರಚಿಸಲಾಗಿದೆ. ಶಿಕ್ಷಣದಲ್ಲಿನ ಸವಾಲಿಗಳೊಇಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ, ಸಮುದಾಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಡನೆ ಸಹಯೋಜಿತವಾಗಿ ಕಾರ್ಯನಿರ್ವಹಿಸುತ್ತಿದರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
- ಸಂಜಯ್ ಮಿಶ್ರಾ , Ph.D. Education Specialist, eLearning, Commonwealth of Learning,Canada
ಸಂಶೋಧನಾ ಕಾರ್ಯಗಳು
ಅತಿದೊಡ್ಡ ಎಸ್.ಟಿ.ಎಫ್ ಶಿಕ್ಷಕರ ಸಮುದಾಯವನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಅಭಿವೃದಿಯಲ್ಲಿ ಸಹಯೋಜಿತವಾಗಿ ಪ್ರಕ್ರಿಯೆ ಅಧ್ಯಯನ ನಡೆಸುವುದಕ್ಕಾಗಿ ಸಹಭಾಗಿತ್ವ ಕಾರ್ಯ ಸಂಶೋಧನೆ (PAR) ಕಾರ್ಯವು ಐಟಿ ಫಾರ್ ಚೇಂಜ್ ಸಂಸ್ಥೆಯು ಒಂದು ಭಾಗವಾಗಿಸಿದೆ. ಇದರ ಮುಖ್ಯ ಸಿದ್ದಾಂತವೇನೆಂದರೆ, ಕೆಳಹಂತದ ಶಿಕ್ಷಕರು ತಮ್ಮ ಕಲಿಕಾ ಸಮುದಾಯದ ಮೂಲಕ ಸಹಯೋಜಿತವಾಗಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ರೀತಿಯಲ್ಲೇ ಸಾಂದರ್ಭಿಕ ಸಂಪನ್ಮೂಲಗಳನ್ನು ರಚಿಸುವುದು. ಶಿಕ್ಷಕರು ಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸುವ , ರಚಿಸುವು, ತಿದ್ದುಪಡಿ ಮಾಡುವ, ಪ್ರಕಟಿಸುವ ನಿರ್ಧಿಷ್ಟ ಪ್ರಕ್ರಿಯೆ ಮತ್ತು ಸಂರಂಚನೆಯನ್ನು ಅರ್ಥೈಸಿಕೊಳ್ಳುವುದು ಇದರ ಭಾಗವಾಗಿದೆ. ಈ ರೀತಿಯ ಸಂಪನ್ಮೂಲ ರಚನೆಯು ತಮ್ಮ ತರಗತಿ ಅಗತ್ಯತೆಗಳಿಗೆ ಮತ್ತು ಸಂದರ್ಭಗಳಿಗೆ ಪೂರಕವಾಗಿದ್ದಾಗ, ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಹೇಗೆ ಸಹಾಕಾರಿಯಾಗಲಿದೆ ಎಂಬುದನ್ನು ಅರ್ಥೈಸಿಕೊಳ್ಳುವುದು ಸಹ ಸಹಭಾಗಿತ್ವ ಕಾರ್ಯ ಸಂಶೋಧನೆಯ ಭಾಗವಾಗಿದೆ.
ಈ ರೀತಿಯಲ್ಲಿ ಅಧ್ಯಯನ ಮಾಡಲು, ನಾವು ಒಂದು ನಿರ್ಧಿಷ್ಟ ಗುಂಪಿನ ಶಿಕ್ಷಕರೊಡನೆ ವರ್ಷದಲ್ಲಿ ಮೂರು ಕಾರ್ಯಗಾರಗಳನ್ನು ನಡೆಸಿದ್ದೇವೆ. ಈ ಕಾರ್ಯಾಗಾರದಲ್ಲಿ ಮತ್ತು ವರ್ಚುಯಲ್ ವೇದಿಕೆಗಳಲ್ಲಿ ಭಾಗವಹಿಸುವ ಮೂಲಕ, ಈ ಶಿಕ್ಷಕರಿಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲ ಪ್ರಕ್ರಿಯೆಯನ್ನು ಅರ್ಥೈಸಲಾಗಿದ್ದು, ಅವರು ಈ ಸಹಯೋಜಿತ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗಿದೆ. ಆಡಳಿತಾತ್ಮಕ ಪ್ರಶ್ನೆಗಳನ್ನು ಹೊಂದಿದ್ದು ಮತ್ತು ಗಮನ ಕೇಂದ್ರಿತ ಗುಂಪು ಚರ್ಚೆಗಳನ್ನು ನಡೆಸುವ ಮೂಲಕ ಈ ಸಂಶೋಧನಾ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇದೇ ರೀತಿಯ ಪ್ರಶ್ನೆಗಳು ಮತ್ತು ಗಮನ ಕೇಂದ್ರಿತ ಗುಂಪು ಚರ್ಚೆಯನ್ನು ಸಹಭಾಗಿತ ಕಾರ್ಯ ಸಂಶೋಧನೆಯ ಪ್ರಕ್ರಿಯೆಯಲ್ಲಿ ಭಾಗವಹಿಸದ ಶಿಕ್ಷಕರಿಗೂ ಸಹ ಬಳಸಲಾಗಿದ್ದು, ಅಲ್ಲಿನ ವ್ಯತ್ಯಾಸಗಳನ್ನು ಗುರುತಿಸಲಾಗಿದೆ.ಈ ಪ್ರಕ್ರಿಯೆಯಲ್ಲಿ , ಶಿಕ್ಷಕರ ತಂತ್ರಜ್ಞಾನ ಬಳಕೆಯ ಜ್ಞಾನ, ಸಂಪನ್ಮೂಲ ಬಳಕೆ, ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ತತ್ವಗಳ ಬಗಗಿನ ಅಂಶಗಳುಳ್ಳ ಪ್ರಶ್ನೆಗಳನ್ನು ಹೊಂದಲಾಗಿತ್ತು .
ಪ್ರಾರಂಭಿಕ ವಿಶ್ಲೇಷಣೆಯಲ್ಲಿ ತಿಳಿದುಬಂದಿರುವುದೇನೆಂದರೆ, ಕೆಳಹಂತದ ಶಿಕ್ಷಕರ ಮೂಲಕ ಸಂಪನ್ಮೂಲ ರಚನೆಯ ಸಿದ್ದಾಂತ ಬಹಳ ಉಪಯುಕ್ತವಾಗಿದೆ. ಸಕ್ರಿಯ ಹಂಚಿಕೆ ಮತ್ತು ಇಮೇಲ್ ಗುಂಪಿಗಳ ಮೂಲಕ ಶಿಕ್ಷಕರು ತಮ್ಮ ಶಹವರ್ತಿ ಶಿಕ್ಷಕರೊಡನೆ ಸಹಯೋಜಿತವಾಗಿ ಕಲಿಕೆಯಲ್ಲಿ ತೊಡಗಲು ಸಾಧ್ಯವಾಗಿದೆ ಮತ್ತು ಈ ಮೂಲಕ ಶಿಕ್ಷಕರ ವೃತ್ತಿಪರ ಬೆಳವಣಿಗೆಯಾಗುತ್ತಿದೆ ಎಂಬುದನ್ನು ಕಾಣಬಹುದು. ಸಂಪನ್ಮೂಲ ಹಂಚಿಕೆಗಾಗಿ ಮೊಬೈಲ್ ಆಧಾರಿತ ಗುಂಪುಗಳು ಸಹ ಅಭಿವೃದ್ದಿಗೊಂಡಿವೆ. ಶಿಕ್ಷಕರು ತಮ್ಮ ವೃತ್ತಿಪರ ಅಭಿವೃದ್ದಿಯಲ್ಲಿ ಮತ್ತು ತರಗತಿ ಕೋಣೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಮತ್ತು ಅಂತರ್ಜಾಲದ ಬಳಕೆಯ ಬಗೆಗಿನ ತಮ್ಮ ಮನೋಭಾವವನ್ನು ಬದಲಾಯಿಸಿಕೊಂಡಿದ್ದಾರೆ. ಶಿಕ್ಷಕರು ಮುಕ್ತವಾಗಿ ಹಂಚಿಕೊಳ್ಳುತ್ತಿರುವುದರ ಮೂಲಕ ನಾವು ಗಮನಿಸಿದ ಪ್ರಮುಖ ಅಂಶವೆನೇಂದರೆ, ಶಿಕ್ಷಕರಿಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಗೆಗೆ ಸಂಪೂರ್ಣ ಅರಿವು ಮೂಡಿದೆ.
ಸ್ಥಳೀಯ ಭಾಷೆಗಳಲ್ಲಿ ಸಂಪನ್ಮೂಲಗಳನ್ನು ಹಂಚಿಕೆ, ಸಮುದಾಯ ರಚನೆ, ಚರ್ಚಾ ಅವಕಾಶಗಳ ಮೂಲಕ ಸಂಪನ್ಮೂಲ ರಚನೆಗೆ ಮತ್ತೊಂದು ಮಾದರಿಯನ್ನು ಶಿಕ್ಷಕರಲ್ಲಿ ಕಾಣಬಹುದಾಗಿದ್ದು, ಇದು ಸ್ಥಳೀಯ ಸಂದರ್ಭಕ್ಕೆ ಪೂರಕವಾಗಿದೆ.
ಮಾಹಿತಿ ನೀತಿ ಮತ್ತು ಸಂವಾದ
ತಂತ್ರಜ್ಞಾನದ ಪಾತ್ರ ಮತ್ತು ತರಗತಿ ಕೊಣೆಯಲ್ಲಿ ಹಾಗು ಶಿಕ್ಷಕರ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆಯ ಬಗ್ಗೆ ಭಾರತದಲ್ಲಿ ಕೆಲವು ಕ್ಲಿಷ್ಟ ಸಂಶೋಧನೆಗಳನ್ನು ಮಾಡಲಾಗಿದೆ. ತಂತ್ರಜ್ಞಾನಬಳಕೆಯ ಅವಕಾಶಗಳ ಬಗ್ಗೆ ಗಿನ ಅರ್ಥೈಸಿಕೊಳ್ಳುವಿಕೆಯಲ್ಲಿ ಕೊರತೆಯನ್ನು ಕಾಣಬಹುದು. ಶಿಕ್ಷಣದಲ್ಲಿ ತಂತ್ರ ಜ್ಞಾನ ಬಳಕೆಯ ಬಗೆಗಿನ ಸಂವಾದಗಳನ್ನು ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳಲ್ಲಿ ರೂಪಿಸುವುದು ಮತ್ತು ಪ್ರಸ್ತುತ ಕಾರ್ಯಕ್ರಮಗಳನ್ನು ರೂಪಿಸುವುದು ಎರಡು ಪ್ರಮುಖ ಮಾರ್ಗಗಳಾಗಿವೆ. ಐಟಿ ಫಾರ್ ಚೇಂಜ್ ಸಂಸ್ಥೆಯು ರಾಜ್ಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಂವಾದಗಳು ಮತ್ತು ಪಠ್ಯಕ್ರಮ ಕಾರ್ಯಕ್ರಮಗಳು, ಶಿಕ್ಷಕರ ಶಿಕ್ಷಣ ಮತ್ತು ತಂತ್ರಜ್ಞಾನ ಕಾರ್ಯಕ್ರಮಗಳ ಒಂದು ಭಾಗವಾಗಿದೆ.
ಶಿಕ್ಷಣ ನೀತಿ, ಪಠ್ಯಕ್ರಮ, ಶಿಕ್ಷಕರ ಶಿಕ್ಷಣ
ಈ ವರ್ಷ ಐಟಿ ಫಾರ್ ಚೇಂಜ್ ಸಂಸ್ಥೆಯು ಈ ವರ್ಷ ಸೇವಾ ನಿರತ ಮತ್ತು ಸೇವಾ ಪೂರ್ವ ಶಿಕ್ಷಕರ ಪಠ್ಯಕ್ರಮ, ಬೋಧನಾ ವಿಧಾನಗಳಲ್ಲಿ ಐ.ಸಿ.ಟಿ ಅಳವಡಿಸುವ ಬಗಿಗಿನ ಚಟುವಟಿಕೆಗಳಲ್ಲಿ ಭಾಗವಹಿಸಿದೆ. ಶಿಕ್ಷಣ ಪಠ್ಯಲ್ರಮದ ವ್ಯವಸ್ಥೆಯೊಳಗೆ ನಮ್ಮ ಕಾರ್ಯಕ್ರಮಗಳನ್ನು ಪ್ರಮುಖವಾಗಿಸುವ ,ಮೂಲಕ ಶಿಕ್ಷಕರಲ್ಲಿ ತಂತ್ರಜ್ಞಾನ ಕೌಶಲವನ್ನು ಬೆಳೆಸಬಹುದಾಗಿದೆ.
- ಐಟಿ ಫಾರ್ ಚೇಂಜ್ ಸಂಸ್ಥೆಯು ಕರ್ನಾಟಕ ಡಿ.ಎಡ್ ಕಾರ್ಯಕಮದ ಪಠ್ಯಕ್ರಮ, ಐ.ಸಿ.ಟಿ ಆಧಾರಿತ ಶಿಕ್ಷಕರ ಸಂಪನ್ಮೂಲ ಕೈಪಿಡಿ ರಚನೆಯಲ್ಲಿ ಭಾಗವಹಿಸಿದೆ ಮತ್ತು ಬೋಧಕ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಿದೆ
- ಐಟಿ ಫಾರ್ ಚೇಂಜ್ ಸಂಸ್ಥೆಯು ವಿವಿಧ ಸಂಸ್ಥೆಗಳ ಬಿ.ಎಡ್ ಸಂಸ್ಥೆಗಳಿಗೂ ಸಹ ಐ.ಸಿ.ಟಿ ಆಧಾರಿತ ಬೋದನೆಯ ಪಠ್ಯಕ್ರಮಗಳನ್ನು ವಿನ್ಯಾಸಗೊಳಿಸಿದೆ, ವಿಜಯ ಕಾಲೇಜಿನ ಬಿ.ಎಡ್ ತರಗತಿಗೆ ಈ ನಿಟ್ಟಿನಲ್ಲಿ ತರಬೇತಿಯನ್ನು ನೀಡಿದೆ.
- ಐಟಿ ಫಾರ್ ಚೇಂಜ್ ಸಂಸ್ಥೆಯು ಮುಕ್ತ ಶೈಕ್ಷಣಿಕ ಸಂಪನ್ಮೂ ಲಗಳ ಬಗೆಗಿನ Massive Open On-line Course (MOOC) from National Council of Education Research and Training (NCERT) and Commonwealth of Learning (COL) ಚಟುವಟಿಕೆಗಳಲ್ಲಿಯೂ ಭಾಗವಹಿಸಿದೆ.
- ಐಟಿ ಫಾರ್ ಚೇಂಜ್ ಸಂಸ್ಥೆಯನ್ನು Central Institute of Educational Technology (CIET), NCERT ಯವರು ಅಭಿವೃದ್ದಿಪಡಿಸುವ ಪಠ್ಯಕ್ರಮ ಪರಿಷ್ಕರಣಾ ವಿಮರ್ಶಾ ಸಭೆಗೆ ಅಹ್ವಾನಿಸಲಾಗಿತ್ತು.
- ಐಟಿ ಫಾರ್ ಚೇಂಜ್ ಸಂಸ್ಥೆಯು ಕರ್ನಾಟಕ ಇ-ವಿದ್ಯಾ ಅಕಾಡೆಮಿಯಲ್ಲಿನ ಬೋಧಕ ಶಿಕ್ಷಕರ ಮತ್ತು ಶೈಕ್ಷಣಿಕ ಆಡಳಿತಅಧಿಕಾರಿಗಳ ವಿವಿಧ ಐ.ಸಿ.ಟಿ ಆಧಾರಿತ ಕೋರ್ಸ್ಗಳಲ್ಲಿ ಭಾಗವಹಿಸಿದೆ.
- ಐಟಿ ಫಾರ್ ಚೇಂಜ್ ಸಂಸ್ಥೆಯು National Council for Teacher Education (NCTE)ರವರು ಎರಡು ವರ್ಷದ ಬಿ.ಎಡ್. ಕೋರ್ಸ್‌ಗೆ ಪ್ರಸ್ತಾಪಿಸಲಾಗಿರುವ ;ವೃತ್ತಿಪರ ಅವಕಾಶಗಳನ್ನು ಅಭಿವೃದ್ದಿ : ಐ.ಸಿ.ಟಿಯನ್ನು ವಿಶ್ಲೇಷಣಾತ್ಮಕವಾಗಿ ಅರ್ಥೈಸಿಕೊಳ್ಳುವುದರ; ಬೆಗಗೆಗಿನ ಹಲವು ಕೋರ್ಸ್‌ಗಳಲ್ಲಿ ಭಾಗವಹಿಸಿದೆ.
ಸಲಹೆ ಮತ್ತು ವಿಮರ್ಶೆ ಗುಂಪುಗಳಲ್ಲಿ ಭಾಗವಹಿಸುವಿಕೆ
|
MHRD ರವರ ಅಹ್ವಾನದಲ್ಲಿ ಐ.ಟಿ.ಫಾರ್ ಚೇಂಜ್ ಸಂಸ್ಥೆಯು ಆರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿನ ಬೋಧಕ ಶಿಕ್ಷಕರ ಐ.ಸಿ.ಟಿ ಕಾರ್ಯಕ್ರಮ ವನ್ನು ವಿಮರ್ಶಿಸಿದೆ. ಇಲ್ಲಿ ಹೆಚ್ಚು ಪ್ರೊಪ್ರೈಟರಿ ತಂತ್ರಾಂಶ ಬಳಸುತ್ತಿದ್ದು, ಮುಕ್ತ ತಂತ್ರಾಂಶ ಬಳಸುವಂತೆ ಮತ್ತು ಪ್ರೋತ್ಸಾಹಿಸುವಂತೆ ರವರಿಗೆ ಈ ಮೂಲಕ ನಾವು MHRD ರವರಿಗೆ ಸಲಹೆ ನೀಡಿದ್ದೇವೆ. |
- ಐಟಿ ಫಾರ್ ಚೇಂಜ್ ಸಂಸ್ಥೆಯು National Council for Teacher Education (NCTE)ರವರು ದೆಹಲಿ ವಿಶ್ವವಿದ್ಯಾಲಯದ ಎರಡು ವರ್ಷದ ಬಿ.ಎಡ್. ಕೋರ್ಸ್‌ಗೆ ಪ್ರಸ್ತಾಪಿಸಲಾಗಿರುವ ;ವೃತ್ತಿಪರ ಅವಕಾಶಗಳನ್ನು ಅಭಿವೃದ್ದಿ : ಐ.ಸಿ.ಟಿಯನ್ನು ವಿಶ್ಲೇಷಣಾತ್ಮಕವಾಗಿ ಅರ್ಥೈಸಿಕೊಳ್ಳುವುದರ; ಬೆಗಗೆಗಿನ ಹಲವು ಪಠ್ಯಕ್ರಮ ವಿನ್ಯಾಸ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ.
-Prof Anita Rampal, Chairperson, NCTE Committee for Two Year B.Ed. program
ಮುಕ್ತ ಮತ್ತು ಉಚಿತ ವಿದ್ಯುನ್ಮಾನ ಪರಿಸರ ವ್ಯವಸ್ಥೆಗೆ ಸಲಹೆ ನೀಡುವುದು
ನಮ್ಮ ಚಟುವಟಿಕೆಗಳಲ್ಲಿ ವೈಯುಕ್ತಿಕ ಸ್ವಾಮ್ಯದ (proprietary) ತಂತ್ರಜ್ಞಾನವನ್ನು ಬಳಸುವುದಕ್ಕಿಂತ, ಮುಕ್ತ ಮತ್ತು ಉಚಿತ ತಂತ್ರಾಂಶದ ವಿದ್ಯುನ್ಮಾನ ಪರಿಸರವನ್ನು ರಚಿಸುವುದು ನಮ್ಮ ಕೆಲಸದ ಒಂದು ಭಾಗವಾಗಿದೆ. ಸಾರ್ವಜನಿಕೆ ಇಲಾಖೆಗಳಲ್ಲಿ ಮುಕ್ತ ಮತ್ತು ಉಚಿತ ತಂತ್ರಾಂಶವನ್ನು ಬಳಕೆ ಮಾಡುವುದು ಮುಖ್ಯವಾಗಿದೆ.ಈ ವಿಷಯವಾಗಿ ಶಿಕ್ಷಣತಜ್ಞರೊಡನೆ, ಸಾಮರ್ಜನಿಕ ಇಲಾಖೆಗಳೊಡನೆ ನಮ್ಮ ಕಾರ್ಯವನ್ನು ಮುಂದುವರೆಸುತ್ತೇವೆ.
- ಮುಕ್ತ ತಂತ್ರಾಂಸವನ್ನು ವಿಂಡೋಷ್ ನಂತಹ ವೈಯುಕ್ತಿಕ ಸ್ವಾಮ್ಯದ (proprietary) ತಂತ್ರಾಂಶಗಳನ್ನು ತೆಗೆದು, ಉಬುಂಟು, ಲಿನಕ್ಸ್ ನಂತಹ ಮುಕ್ತ ತಂತ್ರಾಂಶ ಬಳಸುವಂತೆ ಮತ್ತು ಬೆಂಬಲಿಸುವಂತೆ ಆಗ್ರಹಿಸಿ ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.
- ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆಯಲ್ಲಿ ಮುಕ್ತ ಮತ್ತು ಉಚಿತ ತಂತ್ರಾಂಶ ಬಳಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ಮತ್ತು PSS Central Institute of Vocational Education ರವರಿಗೆ ಪತ್ರಬರೆದಿದ್ದೇವೆ.
- ವೈಯುಕ್ತಿಕ ಸ್ವಾಮ್ಯದ (proprietary) ತಂತ್ರಾಂಶಗಳಿಂದ ಹೊರಬಂದು ಮುಕ್ತ/ಉಚಿತ ತಂತ್ರಾಂಶ ಬಳಸುವಂತೆ ಸಾರ್ವಜನಿಕವಾಗಿ ಪ್ರೋತ್ಸಾಹಿಸುವಂತೆ ನಾವು ಸಾರ್ವಜನಿಕ ಇಲಾಖೆಗಳಿಗೆ ಮತ್ತು ವಿವಿಧ ಸಂಸ್ಥೆಗಳಿಗೆ ಸಲಹೆ ನೀಡುತ್ತಿದ್ದೇವೆ.
"ಮುಕ್ತ /ಉಚಿತ ತಂತ್ರಾಂಶ ಬಳಸಲು ಹಲವು ಪ್ರಸ್ತುತಿಗಳನ್ನೊಳಗೊಂಡ ತರಬೇತಿ ಮತ್ತು ಪ್ರಾಯೋಗಿಕ ಚಟುವಟಿಕೆಗಳು ಮುಕ್ತ ತಂತ್ರಾಂಶದ ಬಗೆಗಿನ ಆತ್ಮವಿಶ್ವಾಸ ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ.
-Seshagiri.Rao.Padaki (Giri), Swami Vivekananda Youth Movement (S.V.Y.M)
ಪ್ರಸ್ತುತಿಗಳು ಮತ್ತು ಮಾಧ್ಯಮ ಲೇಖನಗಳು
ಕೆಲವು ಕಾರ್ಯಕ್ರಮಗಳಲ್ಲಿ ನಮ್ಮ ಕೆಲಸದಬಗ್ಗೆ ಪ್ರಸ್ತುತಿ ನೀಡಲಾಗಿದೆ, ಅವುಗಳೆಂದರೆ :
|